ನೃಪತುಂಗ ಕಲಾ ವಾಣಿಜ್ಯ ಮತ್ತು ವಿಜ್ಞಾನ ಪ್ರಥಮ ದರ್ಜೆ ಮಹಾವಿದ್ಯಾಲಯ, ಸೇಡಮ್
About Us
Nrupatunga Arts & Commerce College Sedam.
ಸೇಠ ಶ್ರೀ ತುಳಸಿರಾಮ್ ಗಿಲಡಾ ನೃಪತುಂಗ ಕಲಾ ವಾಣಿಜ್ಯ ಮ್ಯಾನೇಜ್ಮೆಂಟ್ ಮತ್ತು ವಿಜ್ಞಾನ ಪ್ರಥಮ ದರ್ಜೆ ಮಹಾವಿದ್ಯಾಲಯ ಸೇಡಂ 1984-85ರ ಶೈಕ್ಷಣಿಕ ವರ್ಷದಲ್ಲಿ ಕೇವಲ 43 ವಿದ್ಯಾರ್ಥಿಗಳಿಂದ ಪ್ರಾರಂಭಗೊAಡು, ಇಲ್ಲಿಯವರೆಗೆ ಸಾವಿರಾರು ವಿದ್ಯಾರ್ಥಿಗಳು ಕಲಾ ವಾಣಿಜ್ಯ ಮ್ಯಾನೇಜ್ಮೆಂಟ್ ಮತ್ತು ವಿಜ್ಞಾನ ಪದವಿ ಶಿಕ್ಷಣವನ್ನು ಪಡೆದು, ಸ್ನಾತ್ತಕೋತ್ತರ ಪದವಿಯನ್ನು ಪೂರೈಸಿ ತಮ್ಮ ಭವ್ಯ ಜೀವನವನ್ನು ರೂಪಿಸಿಕೊಂಡಿದ್ದಾರೆ.
ಪೂಜ್ಯ ಶ್ರೀ ನಿ ಪ್ರ ಶಿವರುದ್ರ ಮಹಾ ಸ್ವಾಮಿಗಳು ಬೇಲಿ ಮಠ ಬೆಂಗಳೂರು ಪೂಜ್ಯರ ಅಮೃತ ಹಸ್ತದಿಂದ ಉದ್ಘಾಟನೆಗೊಂಡು ಶೈಕ್ಷಣಿಕ ಸೇವೆಗೈಯುತ್ತಿದೆ. ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರದ ಮಾನವ ಸಂಪನ್ಮೂಲ ಸಚಿವರಾದ ಡಾ. ಮುರಳಿಮನೋಹರ್ ಜೋಷಿ, ಕಲ್ಬುರ್ಗಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾಕ್ಟರ್ ಏನ್ ರುದ್ರಯ್ಯ ಉಪಸ್ಥಿತರಿದ್ದರು.
ಮಹಾವಿದ್ಯಾಲಯದ ಭವ್ಯ ಕಟ್ಟಡದ ನಿರ್ಮಾಣಕ್ಕೆ ಧನಸಹಾಯ ನೀಡಿದವರು ಸೇಡಂ ಪಟ್ಟಣದ ಪ್ರಸಿದ್ಧ ವ್ಯಾಪಾರಿಗಳಾದ ದಿಗಂಗತ ಹನುಮಾನ್ ಭಗಸ್ ಗಿಲ್ದಾ. ಕಾಲೇಜು ಕಟ್ಟಡ ನಿರ್ಮಾಣದ ವಿನ್ಯಾಸ ತಯಾರಿಸಿದವರು ಹಿರಿಯ ಅಭಿಯಂತರರಾದ ಶ್ರೀ ವೀರೇಂದ್ರ ಕಲಬುರ್ಗಿಯವರು. ಮಹಾವಿದ್ಯಾಲಯದಲ್ಲಿ ಅಧ್ಯಯನಗೈಯುತ್ತಿರುವ ವಿದ್ಯಾರ್ಥಿಗಳು ರಾಜ್ಯ-ರಾಷ್ಟ್ರ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದು ಕಾಲೇಜಿಗೊಂದು ಹೆಮ್ಮೆ.
ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿಗಳಾದ ಡಾಕ್ಟರ್ ಬಿದರಿ ಚಂದ್ರಭಾಗ ಅವರಿಗೆ ಉತ್ತಮ ಎನ್.ಎಸ್.ಎಸ್ ಅಧಿಕಾರಿಗಳು ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದ್ದು ಕಾಲೇಜು ಒಂದು ಹೆಮ್ಮೆ. ಪದವಿ ಮಹಾ ವಿದ್ಯಾಲಯದ 25 ವಿದ್ಯಾರ್ಥಿಗಳು ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿಯ ಘಟಿಕೋತ್ಸವದಲ್ಲಿ ಚಿನ್ನದ ಪದಕವನ್ನು ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದು ಕಾಲೇಜಿಗೊಂದು ಹೆಮ್ಮೆ.
ಪರಮ ಪೂಜ್ಯ ಶಿವರುದ್ರ ಮಹಾಸ್ವಾಮಿಗಳು ಬೇಲಿ ಮಠ ಬೆಂಗಳೂರು, ಡಾ. ಮುರಳಿ ಮನೋಹರ್ ಜೋಶಿ ಮಾನವ ಸಂಪನ್ಮೂಲ ಸಚಿವರು ಭಾರತ ಸರ್ಕಾರ, ಡಾಕ್ಟರ್ ವಿ ಸಿ ಮಹಾಬಲೇಶ್ವರಪ್ಪ ಉಪಕುಲ ಸಚಿವರು ಕಲಬುರಗಿ ವಿಶ್ವವಿದ್ಯಾಲಯ ಗುಲಬರ್ಗ, ಡಾಕ್ಟರ್ ಏನ್ ರುದ್ರಯ್ಯ ಕುಲಪತಿಗಳು ಕಲಬುರ್ಗಿ ವಿಶ್ವವಿದ್ಯಾಲಯ ಗುಲಬರ್ಗ, ಪ್ರೊಫೆಸರ್ ಎಂ ಬಿ ನಾಡಕರಣೆ ಕುಲಪತಿಗಳು, ಹಂಪಿ ವಿಶ್ವವಿದ್ಯಾಲಯದ ಇತಿಹಾಸ ತಜ್ಞರಾದ ಡಾಕ್ಟರ್ ದೇವರಕೊಂಡ ರೆಡ್ಡಿ, ಶ್ರೀ ಕೆ ಎನ್ ಗೋವಿಂದಾಚಾರ್ಯ ಶೈಕ್ಷಣಿಕ ಚಿಂತಕರು, ಪ್ರೊಫೆಸರ್ ಇ ಟಿ ಪುಟ್ಟಣ್ಣಯ್ಯ ಕುಲಪತಿಗಳು, ಡಾ. ಪಿ ಎಸ್ ಶಂಕರ ಸಂಚಾಲಕರು ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಬೆಂಗಳೂರು, ಪರಮ ಪೂಜ್ಯ ಗವಿಸಿದ್ದೇಶ್ವರ ಸ್ವಾಮಿಗಳು ಕೊಪ್ಪಳ, ಪರಮ ಪೂಜ್ಯ ನಿರ್ಭಯಾನಂದ ಸ್ವಾಮೀಜಿ, ಡಾಕ್ಟರ್ ಬಿ ಸಿ ಮೂಲಿಮನಿ ಕುಲಪತಿಗಳು, ಪ್ರಖ್ಯಾತ ಜಾದುಗಾರ ಶ್ರೀ ಕುದ್ರೋಳಿ ಗಣೇಶ್, ಶ್ರೀ ವಿದ್ಯಾನಂದ ಷನೈ, ಶ್ರೀ ಧತ್ತಾತ್ರೇಯ ಹೊಸ ಬಾಳೆ ಸಂದರ್ಶನವನ್ನು ನೀಡಿ ಮಾರ್ಗದರ್ಶನಗೈದಿದ್ದಾರೆ.