ಶ್ರೀ ವೀರಭದ್ರೇಶ್ವರ ವಿದ್ಯಾಮಂದಿರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಕೋಲ್ಕುಂದಾ

Image
Image
Image
Image
Image
About Us

Sri Veerbhadreshwar Vidya Mandir Higher Primary School, Kolkunda

ಶ್ರೀ ವೀರಭದ್ರೇಶ್ವರ ವಿದ್ಯಾ ಮಂದಿರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕೋಲ್ಕುಂದ ತಾಲೂಕ್ ಸೇಡಂ 1983-84 ರ ಶೈಕ್ಷಣಿಕ ವರ್ಷದಲ್ಲಿ ಸ್ಥಾಪನೆಗೊಂಡಿತು. ಪ್ರಾರಂಭದ ವರ್ಷದಲ್ಲಿ ಕೇವಲ 36 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದು, ಇಂದು ಸುಮಾರು 266 ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣವನ್ನು ನೀಡುತ್ತಿದೆ.
ಪ್ರತಿ ವರ್ಷ ವಿದ್ಯಾರ್ಥಿಗಳ ಪ್ರವೇಶ ಹೆಚ್ಚಾಗುತ್ತಿರುವುದು ಒಂದು ವಿಶೇಷ. ಶ್ರೀ ಶರಣಯ್ಯ ಮಠಪತಿ ಮೊದಲ ಪ್ರಧಾನ ಅಧ್ಯಾಪಕರು. ಪ್ರಸ್ತುತ ಶ್ರೀ ಐ ಪಿ ಬಗಲಿ ಪ್ರಧಾನ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶಾಲಾ ಕಟ್ಟಡ ನಿರ್ಮಾಣದ ನಕ್ಷೆ ತಯಾರಿಸಿದ ಅಭಿಯಂತರು ಶ್ರೀ ಮುರುಗಪ್ಪ ಕೋಲ್ಕೂರ್ ಸೇಡಂ. ಶಾಲಾ ಕಟ್ಟಡದ ಧನಸಹಾಯ ನೀಡಿದವರು ಶ್ರೀ ಶಿವಕುಮಾರ್ ಎನ್ ಹೂಗಾರ್ ದುಗುನೂರ್ ಅವರ ಸ್ಮೃತಿಯಲ್ಲಿ ಅವರ ಪಾಲಕರು ಧನಸಹಾಯ ನೀಡಿದ ಗೌರವಾನ್ವಿತರು. ನಂತರ ಪ್ರತಿಕ್ಷಾ ಟ್ರಸ್ಟ್ ಬೆಂಗಳೂರು ಅವರ ಧನ ಸಹಾಯದಲ್ಲಿಯೂ ಸಹಿತ ಕಟ್ಟಡ ನಿರ್ಮಾಣಗೊಂಡಿದೆ.
ಶ್ರೀ ಕೊತ್ತಲ ಬಸವೇಶ್ವರ ಪ್ರಾಥಮಿಕ ಶಾಲೆಯು ರಾಜ್ಯದ ಗಡಿ ಭಾಗದಲ್ಲಿರುವ ಕೊಲ್ಕುಂದ ಎಂಬ ಗ್ರಾಮದಲ್ಲಿ ಶೈಕ್ಷಣಿಕ ಸೇವೆ ನೀಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದೆ.

Academics

01

Higher Primary

 Vidya Mandir Higher Primary School, Kolkunda 

Gallery