ಶ್ರೀಮತಿ ನರ್ಮದಾ ದೇವಿ ಗಿಲಡಾ ಕನ್ಯಾ ಪ್ರೌಢಶಾಲೆ ಸೇಡಮ್
"ಶಾಲೆ ಸಾಮಾಜಿಕ ಪರಿವರ್ತನೆ ಕೇಂದ್ರ"
About Us
Smt Narmada Devi Gilada Girls High School Sedam
ಶ್ರೀಮತಿ ನರ್ಮದಾ ದೇವಿ ಗಿಲಡಾ ಕನ್ಯಾ ಪ್ರೌಢಶಾಲೆ 2002 ಜೂನ್ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಗೊAಡು, ಶ್ರೀಮತಿ ಡಾ. ಸರಸ್ವತಿಬಿ ಪಾಟೀಲ್ ಪ್ರಾಧ್ಯಾಪಕರು, ಪ್ರಾಣಿಶಾಸ್ತ್ರ ವಿಭಾಗ ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಅವರು ಉದ್ಘಾಟಿಸಿದರು.
ಸೇಡಂ ಪಟ್ಟಣದ ಪ್ರತಿಷ್ಠಿತ ಉದ್ದಿಮೆಗಾರ ಕುಟುಂಬದ ಶ್ರೀವೆಂಕಟರೆಡ್ಡಿ ಆಯಿಲರೆಡ್ಡಿ ಪಾಟೀಲ್ ಅವರು ಭೂ ದಾನಿಗಳು. ಶ್ರೀ ಗಿಲಡಾ ಪರಿವಾರದ ಹನುಮಾನದಾಸ್ ಗಿಲಡಾ ಅವರು ಶಾಲಾ ಕಟ್ಟಡ ನಿರ್ಮಾಣದ ದಾನಿಗಳು. ಶ್ರೀ ಬಸವರಾಜ ಕೆರಳ್ಳಿ ಅವರು ಕಟ್ಟಡ ನಿರ್ಮಾಣದ ನಕ್ಷೆಯ ಅಭಿಯಂತರರು.
ಶ್ರೀಮತಿ ಜಗದೇವಿ ಕೋಲ್ಕುಂದ ಅವರು ಶಾಲೆಗೆ ಮೊದಲ ಪ್ರಧಾನ ಅಧ್ಯಾಪಕರು. ಪ್ರಸ್ತುತ ಶ್ರೀಮತಿ ನಾಗಜ್ಯೋತಿ ಕಡಬಗಾಂವ್ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಾಲೆ ಪ್ರಾರಂಭವಾದ ವರ್ಷದಲ್ಲಿ ದಾಖಲಾದ ಮಕ್ಕಳ ಸಂಖ್ಯೆ 18 ಮಾತ್ರ, ಇಂದು ಸುಮಾರು 131 ವಿದ್ಯಾರ್ಥಿಗಳು ಪ್ರೌಢ ಶಾಲಾ ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯಲ್ಲಿ ಅಧ್ಯಯನಗೈಯುತ್ತಿರುವ ವಿದ್ಯಾರ್ಥಿಗಳು ತಾಲೂಕ ಮಟ್ಟದ, ಜಿಲ್ಲಾ ಮಟ್ಟz ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ. ಕು ಭಾವನಾ ತಂದೆ ಮಾಣಿಕ್ ರಾವ್ ರಾಷ್ಟ್ರ ಮಟ್ಟದ ವಿಜ್ಞಾನ ಪತ್ರವಾಚನಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ನಮ್ಮ ಶಾಲೆಗೊಂದು ಹೆಮ್ಮೆಯ ವಿಷಯ. ಶಾಲೆಯ ಪ್ರಧಾನ ಗುರುಗಳಾದ ಶ್ರೀಮತಿ ನಾಗಜ್ಯೋತಿ ಕಡಬಗಾಂವ್ ಅವರು ಕಲ್ಬುರ್ಗಿ ಜಿಲ್ಲಾ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದು ನಮ್ಮ ಶಾಲೆಗೊಂದು ಹೆಮ್ಮೆ.
ಖ್ಯಾತ ಶಿಕ್ಷಣ ತಜ್ಞರಾದ ಡಾಕ್ಟರ್ ಗುರುರಾಜ ಕರ್ಜಗಿ, ಡಾ. ಸುಧಾ ಮೂರ್ತಿ, ಡಾ.ನಾ ಸೋಮೇಶ್ವರ್, ಶ್ರೀ ಯು ಭೀಮರಾವ್, ಶ್ರೀ ಮಹೇಶ ಮಾಶಳ, ಡಾಕ್ಟರ್ ಸುಂದರ ಭೂಪತಿ, ಶ್ರೀ ಸಿದ್ದು ಯಾಪಲ್ಪರ್ವಿ, ಶ್ರೀ ಚೇತನ್ ರಾವ್ ಶಿಕ್ಷಣ ತಜ್ಞರು ಶಾಲೆಗೆ ಸಂದರ್ಶನ ನೀಡಿ ಮಾರ್ಗದರ್ಶನಗೈದ ಗಣ್ಯರು.
Academics
High School
ಶ್ರೀಮತಿ ನರ್ಮದಾ ದೇವಿ ಗಿಲಡಾ ಕನ್ಯಾ ಪ್ರೌಢಶಾಲೆ ಸೇಡಮ್