ಬಾಲ ಭಾರತಿ ವಿದ್ಯಾ ಮಂದಿರ, ಸೇಡಮ್
ಬಾಲ ಭಾರತಿ ವಿದ್ಯಾ ಮಂದಿರ ಹಿರಿಯ ಪ್ರಾಥಮಿಕ ಶಾಲೆಗೆ ಸಂದರ್ಶನ ನೀಡಿದ ಗಣ್ಯರ ಹೆಸರು.
ಪೂಜ್ಯಶ್ರೀ ಶಿವಕುಮಾರ್ ಸ್ವಾಮಿಗಳು, ಪೂಜ್ಯ ಶ್ರೀ ಸ್ವಾಮಿ ರಂಗನಾಥನ್ ಜಿ, ಪೂಜ್ಯ ಸಂತೋಷ್ ಭದ್ರಗಿರಿ ಅತ್ಯುತ್ತದಾಸರು, ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು, ಶ್ರೀ ಯಾದವರಾವ್ ಜೋಶಿ, ಶ್ರೀ ವಿದ್ಯಾನಂದ ಶಣೈ, ಜಸ್ಟಿಸ್ ಶ್ರೀ ಶಿವರಾಜ ಪಾಟೀಲ್, ಜಸ್ಟಿಸ್ ರಾಮಾ ಜೋಯಸ್, ಡಾಕ್ಟರ್ ಎಚ್ ತಿಪ್ಪೇರುದ್ರಸ್ವಾಮಿ, ಡಾಕ್ಟರ್ ಗುರುರಾಜ ಕರ್ಜಗಿ, ಡಾಕ್ಟರ್ ಏನ್ ರುದ್ರಯ್ಯ, ಶ್ರೀಮತಿ ಗಂಗೂಬಾಯಿ ಹಾನಗಲ್, ಶ್ರೀಮತಿ ಸುಭದ್ರಮ್ಮ ಮನ್ಸೂರ್ ಮತ್ತು ಅನೇಕ ಸಂತ ಮಹಾಂತರು,ರಾಜಕೀಯ ಗಣ್ಯರು ಸಂದರ್ಶನವನ್ನು ನೀಡಿ ಮಾರ್ಗದರ್ಶನಗೈದಿದ್ದಾರೆ.
About Us
Bal Bharati Vidya Mandir Higher Primary School, Sedam
1974ರ ವಸಂತ ಪಂಚಮಿಯAದು ಪೂಜಶ್ರೀ ಮಡಿವಾಳಯ್ಯ ಸ್ವಾಮಿಗಳ ಅಮೃತ ಹಸ್ತದಿಂದ ಪ್ರಾರಂಭಗೊAಡ ನಮ್ಮ ಶಿಕ್ಷಣ ಸಮಿತಿಯ ಇನ್ನೊಂದು ಪ್ರಕಲ್ಪವೇ ಶ್ರೀ ಶಿವಶಂಕರ ಸ್ಮೃತಿ ಬಾಲ ಭಾರತಿ ವಿದ್ಯಾ ಮಂದಿರ ಸೇಡಂ. ಆರಂಭದಲ್ಲಿ ನಾಲ್ಕು ಮಕ್ಕಳೊಂದಿಗೆ ಪ್ರಾರಂಭಗೊAಡ ಸಮಿತಿಯ ಪ್ರಕಲ್ಪವು ಇಲ್ಲಿಯವರೆಗೆ ಸುಮಾರು 9,891 ಮಕ್ಕಳು ಪ್ರಾಥಮಿಕ ಶಿಕ್ಷಣವನ್ನು ಪಡೆದಿದ್ದಾರೆ. ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪರಿಸರದಲ್ಲಿ ಸ್ಥಾಪನೆಗೊಂಡ ಈ ಶಾಲೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬೇಕಾಗಿದೆ.
ಶ್ರೀ ಶಿವರಾಮರೆಡ್ಡಿ ಅವರು ಮೊದಲ ಪ್ರಧಾನ ಅಧ್ಯಾಪಕರಾದರೆ, ಸುಮಾರು ಮೂರು ದಶಕಗಳಿಗಿಂತಲೂ ಹೆಚ್ಚು ಪ್ರಧಾನ ಅಧ್ಯಾಪಕರಾಗಿ ಸೇವೆ ಸಲ್ಲಿಸಿದವರು ಶ್ರೀ ಪಿ ಭೀಮರೆಡ್ಡಿ ಚಪೆಟ್ಲಾ ಅವರು. ಪ್ರಸ್ತುತ ಶ್ರೀ ನಿಂಗಪ್ಪ ಬಿರಾದಾರ ಅವರು ಮುಖ್ಯ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪರಿಸರದಲ್ಲಿ 1974ರಲ್ಲಿ ಪ್ರಾರಂಭವಾದ ಬಾಲ ಭಾರತಿ ವಿದ್ಯಾ ಮಂದಿರ ಶಾಲೆಗೆ 2018 ರಲ್ಲಿ ನೆಲ ಮಹಡಿಯ ನೂತನ ಕಟ್ಟಡ ಷ ಬ್ರ ಶ್ರೀ ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಶಿವಶಂಕರೇಶ್ವರ ಮಠ ಪೂಜ್ಯರ ಅಮೃತಹಸ್ತದಿಂದ ಉದ್ಘಾಟಿಸಲಾಯಿತು. ದಿ. ಬಸವರಾಜ್ ಗದ್ವಾಲ್ ಅಭಿಯಂತರರು ಕಟ್ಟಡದ ನಕ್ಷೆಯನ್ನು ತಯಾರಿಸಿದರು.
"ಶಾಲೆ ಸಾಮಾಜಿಕ ಪರಿವರ್ತನೆ ಕೇಂದ್ರ"
Academics
Primary School
ಶ್ರೀ ಶಿವಶಂಕರ ಸ್ಮೃತಿ ಬಾಲ ಭಾರತಿ ವಿದ್ಯಾ ಮಂದಿರ ಸೇಡಮ್
High School
ಶ್ರೀ ಶಿವಶಂಕರ ಸ್ಮೃತಿ ಬಾಲ ಭಾರತಿ ವಿದ್ಯಾ ಮಂದಿರ ಸೇಡಮ್