About Us

Image
Image
Image
Image
Image
About Us

Smt Jashodabai Narayandas Raghunathdas Ladda Law College, Sedam

ಜೇಸೋದಾಬಾಯಿ ನಾರಾಯಣದಾಸ್ ರಘುನಾಥ ಲಡ್ಡಾ ಕಾನೂನು ಮಹಾವಿದ್ಯಾಲಯ ಸೇಡಂ 2006 ಶೈಕ್ಷಣಿಕ ವರ್ಷದಲ್ಲಿ ಸ್ಥಾಪನೆಗೊಂಡು ಇಲ್ಲಿಯವರೆಗೆ 575 ವಿದ್ಯಾರ್ಥಿಗಳು ಕಾನೂನು ವ್ಯಾಸಂಗಕ್ಕಾಗಿ ಪ್ರವೇಶವನ್ನು ಪಡೆದಿದ್ದಾರೆ. ಕಾನೂನು ಮಹಾ ವಿದ್ಯಾಲಯದ ಮೊದಲ ಪ್ರಾಚಾರ್ಯರಾಗಿ ಶ್ರೀಮತಿ ಸವಿತಾ ಆರ್ ಗಿರಿ ಅವರು ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಶ್ರೀ ಶರಣಗೌಡ ಎಸ್ ಪಾಟೀಲ್ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾನೂನು ಮಹಾವಿದ್ಯಾಲಯದ ನೂತನ ಕಟ್ಟಡಕ್ಕೆ ಧನಸಹಾಯ ನೀಡಿದ ಸಂಸ್ಥೆ ಬೆಂಗಳೂರಿನ ಪ್ರತಿಕ್ಷ ಟ್ರಸ್ಟ್ (ಇನ್ಫೋಸಿಸ್ ಸಂಸ್ಥೆಯ ಅಂಗ ಸಂಸ್ಥೆ). ನೂತನ ಕಟ್ಟಡದ ಉದ್ಘಾಟನೆಯು ಪರಮ ಪೂಜ್ಯ ಸದಾಶಿವ ಸ್ವಾಮಿಗಳ ಅಮೃತ ಹಸ್ತದಿಂದ ನೆರವೇರಿತು.
ಗೌರವಾನ್ವಿತ ಶ್ರೀ ಮಂಜುನಾಥ ನ್ಯಾಯಾಧೀಶರು ಉಚ್ಚ ನ್ಯಾಯಾಲಯ ಕರ್ನಾಟಕ, ಶ್ರೀ ಸುರೇಶ ಕುಮಾರ್ ಕಾನೂನು ಸಚಿವರು ಕರ್ನಾಟಕ ಸರ್ಕಾರ, ಶ್ರೀ ಬಸವರಾಜ್ ಪಾಟೀಲ್ ಸೇಡಂ, ಶ್ರೀ ನಾರಾಯಣದಾಸ್ ಲಡ್ಡಾ, ಡಾಕ್ಟರ್ ನಾಗರೆಡ್ಡಿ ಪಾಟೀಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾನೂನು ಶಿಕ್ಷಣ ಪದವಿಯ ಅಧ್ಯಯನದ ಜೊತೆಗೆ ವಿದ್ಯಾರ್ಥಿಗಳು ಚಿತ್ರಕಲೆ ಮತ್ತು ವ್ಯಂಗ ಚಿತ್ರದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.
ಡಾ. ಸಿ.ಆರ್.ಚಂದ್ರಶೇಖರ್ ಮನೋ ತಜ್ಞರು, ಡಾಕ್ಟರ್ ನಾ ಸೋಮೇಶ್ವರ, ಡಾ. ಶಾನಭಾಗ್ ಮಾನವ ಹಕ್ಕುಗಳ ಕಾರ್ಯಕರ್ತರು, ಡಾ ಜೆ ಎಸ್ ಪಾಟೀಲ್ ವಿಶ್ರಾಂತ ಕುಲಪತಿಗಳು, ಡಾಕ್ಟರ್ ಬಿ ಸಿ ಪಾಟೀಲ್ ಮಾನ್ಯ ಕುಲ ಸಚಿವರು, ಶ್ರೀನಿವಾಸ್ ಸಿರನೂರಕರ್ ಸಂಪಾದಕರು ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆ ಸಂದರ್ಶನವನ್ನು ನೀಡಿ ಮಾರ್ಗದರ್ಶನಗೈದಿದ್ದಾರೆ.

ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ್ ಜಶೋದಾಬಾಯಿ ನಾರಾಯಣದಾಸ ರಘುನಾಥದಾಸ್ ಲಡ್ಡಾ ಕಾನೂನು ಮಹಾ ವಿದ್ಯಾಲಯ.

ಸುಮಾರು 8 ಸೇವಾ ಬಳಗ ಹೊಂದಿ ಶೈಕ್ಷಣಿಕ ಸೇವೆ ಗೈಯುತ್ತಿರುವ ಕಾನೂನು ಮಹಾ ವಿದ್ಯಾಲಯದಲ್ಲಿ ಅಭ್ಯಾಸ ಮಾಡಿರುವ ಸುಮಾರು 150 ಕಿಂತಲೂ ಹೆಚ್ಚು ಕಾನೂನು ಪದವಿದರರು ನ್ಯಾಯವಾದಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 20 ಕಾನೂನು ಪದವಿ ದರ ವಿವಿಧ ಪ್ರತಿಷ್ಠಿತ ಕಂಪನಿಗಳಲ್ಲಿ ಕಾನೂನು ಸಲಹೆಗಾರರಾಗಿ, ಸುಮಾರು ಹತ್ತು ಜನ ವಿದ್ಯಾರ್ಥಿಗಳು ಸರಕಾರದ ವಿವಿಧ ಹುದ್ದೆಗಳನ್ನು ಪಡೆದುಕೊಂಡಿದ್ದಾರೆ.

 ಕಾನೂನು ಮಹಾ ವಿದ್ಯಾಲಯವು ಸುಸಜ್ಜಿತವಾದ ಕಟ್ಟಡ, ಉತ್ತಮ ಗ್ರಂಥಾಲಯ, ಆಟದ ಮೈದಾನ, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಉತ್ತಮ ಪರಿಸರ ನೀಡಲಾಗುತ್ತಿದ್ದು, ಕರ್ನಾಟಕದ ಭಾಗದಲ್ಲಿ ಉತ್ತಮ ಫಲಿತಾಂಶವನ್ನು ಪಡೆದಿರುವದು.

 ಸಂಸ್ಥೆಗೆ ಹಾಗೂ ಕಾಲೇಜಿಗೆ ಒಂದು ಹೆಮ್ಮೆಯ ವಿಷಯ.