ಶ್ರೀ ಕೊತ್ತಲ ಬಸವೇಶ್ವರ ಪ್ರೌಢಶಾಲೆ, ಕೋಲ್ಕುಂದಾ




About Us
Sri Kothala Basaveshwar High School, Kolkunda
“ಶಾಲೆಯೆಂದು ಸಾಮಾಜಿಕ ಪರಿವರ್ತನೆಯ ಕೇಂದ್ರ” ಸತ್ವಶಾಲಿ ಮತ್ತು ಶಕ್ತಿಶಾಲಿ ವ್ಯಕ್ತಿತ್ವವನ್ನು ಹೊಂದಿರುವ ನಾಗರಿಕರನ್ನು ಸಮಾಜಕ್ಕೆ ಅರ್ಪಿಸುವುದು ಈ ಸಂಸ್ಥೆಯ ಮತ್ತು ಶಾಲೆಯ ಮುಖ್ಯ ಉದ್ದೇಶವಾಗಿದೆ. ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮನುಷ್ಯನ ಬದುಕಿಗೆ ಬೇಕಾದ ಮೌಲ್ಯಾಧಾರಿತ ಶಿಕ್ಷಣ ಕೊಡುವುದು ಮೂಲ ಉದ್ದೇಶವಾಗಿದೆ.
ಶ್ರೀ ಕೊತ್ತಲ ಬಸವೇಶ್ವರ ಪ್ರೌಢಶಾಲೆಯಿಂದ ಇಲ್ಲಿಯವರೆಗೆ 10ನೇಯ ತರಗತಿಯ 08 ತಂಡಗಳು ತೆರ್ಗಡೆ ಹೊಂದಿರುತ್ತವೆ.ಏಪ್ರೀಲ್ 2012ರ ಎಸ್ಸ್ಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡ 100ರಷ್ಟು ಫಲಿತಾಂಶ ಪಡೆದು ಶಿಕ್ಷಣ ಇಲಾಖೆಯಿಂದಅಭಿನAದನೆಗೆ ಪಾತ್ರವಾಗಿದೆ.
Explore now
ಶ್ರೀ ಕೊತ್ತಲ ಬಸವೇಶ್ವರ ಪ್ರೌಢಶಾಲೆ ಕೋಲಕುಂದ 2006 2007ರ ಶೈಕ್ಷಣಿಕ ವರ್ಷದಲ್ಲಿ ಸ್ಥಾಪನೆಗೊಂಡಿತು. ಪ್ರಾರಂಭದ ವರ್ಷದಲ್ಲಿ ಕೇವಲ 37 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದು, ಇಂದು ಸುಮಾರು 160 ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಣವನ್ನು ನೀಡುತ್ತಿದೆ. ಪ್ರತಿ ವರ್ಷ ವಿದ್ಯಾರ್ಥಿಗಳ ಪ್ರವೇಶ ಹೆಚ್ಚಾಗುತ್ತಿರುವುದು ಒಂದು ವಿಶೇಷ. ಶ್ರೀ ವೀರೇಶ್ ಪಾಟೀಲ್ ಮೊದಲ ಪ್ರಧಾನ ಅಧ್ಯಾಪಕರು. ಪ್ರಸ್ತುತ ಶ್ರೀ ಗಂಗಾಧರಯ್ಯ ಪ್ರಧಾನ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಟ್ಟಡ ನಿರ್ಮಾಣದ ನಕ್ಷೆ ತಯಾರಿಸಿದ ಅಭಿಯಂತರು ಶ್ರೀ ಮುರುಗಪ್ಪ ಕೋಲ್ಕೂರ್ ಸೇಡಂ. ಶಾಲಾ ಕಟ್ಟಡದ ಧನಸಹಾಯ ನೀಡಿದವರು ಪ್ರತಿಕ್ಷ ಟ್ರಸ್ಟ್ ಬೆಂಗಳೂರು.
ಶ್ರೀ ಕೊತ್ತಲ ಬಸವೇಶ್ವರ ಪ್ರೌಢಶಾಲೆಯು ರಾಜ್ಯದ ಗಡಿ ಭಾಗದಲ್ಲಿರುವ ಕೊಲ್ಕುಂದ ಎಂಬ ಗ್ರಾಮದಲ್ಲಿ ಶೈಕ್ಷಣಿಕ ಸೇವೆ ನೀಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದೆ.
Academics
01
High School
Sri Kothala Basaveshwar High School, Kolkunda