ಶ್ರೀಮತಿ ನರ್ಮದಾದೇವಿ ಗಿಲಡಾ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ, ಸೇಡಮ್

Image
Image
Image
Image
Image
About Us

Smt Narmada Devi Gilada, Kanya Hiriya Prathamika Shale ,Sedam

ಶ್ರೀಮತಿ ನರ್ಮದಾ ದೇವಿ ಗಿಲಡಾ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ 2002 ಜೂನ್ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಗೊAಡ ಶಾಲೆ ಶ್ರೀಮತಿ ಡಾಕ್ಟರ್ ಸರಸ್ವತಿ ಬಿ ಪಾಟೀಲ್ ಪ್ರಾಧ್ಯಾಪಕರು ಪ್ರಾಣಿಶಾಸ್ತ್ರ ವಿಭಾಗ ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಅವರು ಉದ್ಘಾಟಿಸಿದರು.
ಸೇಡಂ ಪಟ್ಟಣದ ಪ್ರತಿಷ್ಠಿತ ಉದ್ದಿಮೆಗಾರ ಕುಟುಂಬದ ಶ್ರೀ ಐಲರೆಡ್ಡಿ ಪಾಟೀಲ್ ಮಾದವಾರ ಅವರು ಶಾಲೆಗೆ ಭೂಮಿ ನೀಡಿದ ದಾನಿಗಳು. ಶ್ರೀ ಗಿಲಡಾ ಪರಿವಾರದ ಶ್ರೀ ಹನುಮಾನ್ ದಾಸ್ ಗಿಲಡಾ ಅವರು ಶಾಲಾ ಕಟ್ಟಡ ನಿರ್ಮಾಣದ ದಾನಿಗಳು. ಶ್ರೀ ಬಸವರಾಜ ಕೆರಳ್ಳಿ ಕಲಬುರಗಿ ಅವರು ಕಟ್ಟಡ ನಿರ್ಮಾಣದ ನಕ್ಷೆ ತಯಾರಿಸಿದ ಅಭಿಯಂತರರು.

ಶ್ರೀಮತಿ ನಾಗರತ್ನ ಪಾಗಾ ಅವರು ಶಾಲೆಗೆ ಮೊದಲ ಪ್ರಧಾನ ಅಧ್ಯಾಪಕರು. ಪ್ರಸ್ತುತ ಶ್ರೀಮತಿ ಅನಂತಮ್ಮ ರೆಡ್ಡಿ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಾಲೆ ಪ್ರಾರಂಭವಾದ ವರ್ಷದಲ್ಲಿ ದಾಖಲಾದ ಮಕ್ಕಳ ಸಂಖ್ಯೆ 26 ಮಾತ್ರ, ಇಂದು ಸುಮಾರು 60 ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯಲ್ಲಿ ಅಧ್ಯಯನಗೈಯುತ್ತಿರುವ ವಿದ್ಯಾರ್ಥಿಗಳು ತಾಲೂಕ ಮಟ್ಟದ, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ. ಶಿಕ್ಷಣ ಪ್ರೇಮಿಗಳಾದ ಶ್ರೀಮತಿ ವಿಜಿ ಉಷಾ, ಖ್ಯಾತ ಶಿಕ್ಷಣ ತಜ್ಞರಾದ ಡಾ. ಗುರುರಾಜ ಕರ್ಜಗಿ, ರಂಗ ಕರ್ಮಿಗಳಾದ ಶ್ರೀಮತಿ ಬಿ ಜಯಶ್ರೀ ಶಾಲೆಗೆ ಸಂದರ್ಶನ ನೀಡಿ ಮಾರ್ಗದರ್ಶನಗೈದಿದ್ದಾರೆ. ಶ್ರೀ ಮ. ನಿ ಪ್ರ. ಕರಿವೃಷಭ ದೇಶಿ ಕೇಂದ್ರ ಶಿವಯೋಗಿಶ್ವರ ಮಹಾಸ್ವಾಮಿಗಳು ಸೋಮೇಕಟ್ಟೆ ಶ್ರೀ ಕಾಡಸಿದ್ದೇಶ್ವರ ಮಠ ನೊಣವಿಕೆರೆ, ವಿರಕ್ತಮಠ ತುರುವೇಕೆರೆಯವರು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಸೇವೆಗೆಯುತ್ತಿರುವ ಸೇವಾ ಬಳಗಕ್ಕೆ ಆಶೀರ್ವದಿಸಿದ್ದಾರೆ.

"ಶಾಲೆ ಸಾಮಾಜಿಕ ಪರಿವರ್ತನೆ ಕೇಂದ್ರ"

ರಾಜ್ಯದ ಗಡಿ ತಾಲೂಕಿನಲ್ಲಿ ಮಹಿಳಾ ಸಾಕ್ಷರತೆಯನ್ನು ಹೆಚ್ಚಿಸುವ ಸಂಕಲ್ಪ ದೊಂದಿಗೆ 2002 ಶೈಕ್ಷಣಿಕ ವರ್ಷದಿಂದ ಪ್ರಾರಂಭಗೊಂಡು ಈ ಭಾಗದಲ್ಲಿ ಮಹಿಳಾ ಸಾಕ್ಷರತೆಯನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಮಹಿಳಾ ಸ್ವಾವಲಂಬನೆ ಸಾಧಿಸುವ ಸಂಕಲ್ಪ ಹೊಂದಿದೆ.
ಮಕ್ಕಳಲ್ಲಿ ಜೀವನ ಮೌಲ್ಯಗಳು ಮತ್ತು ಕೌಶಲ್ಯಗಳನ್ನು ಕಲಿಸುವುದರ ಜೊತೆಗೆ, ಸ್ವಾಭಿಮಾನಿ ಬದುಕು ಸಾಗಿಸುವುದು ಹೇಗೆ ಎನ್ನುವುದನ್ನು ಕಲಿಸಿಕೊಡಲಾಗುತ್ತಿದೆ.

Academics

01

Primary

ಶ್ರೀಮತಿ ನರ್ಮದಾದೇವಿ ಗಿಲಡಾ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ ಸೇಡಮ್

Gallery