ಮಾತೃ ಮಂದಿರ ಪ್ರೌಢಶಾಲೆ ಚಿಂಚೋಳಿ
About Us
Matru Mandir Higher School Chincholi
ನಮ್ಮ ಈ ಶಾಲೆಯು 1991- 92 ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಾರಂಭವಾಗಿದ್ದು ಈ ಶಾಲೆಯ ಮೊದಲ ಮುಖ್ಯ ಗುರುಗಳಾಗಿ ಶ್ರೀ ಶ್ರೀನಿವಾಸ ಖಾಶನ್ಮಿಸ್ ಸೇವೆ ಸಲ್ಲಿಸಿದ್ದಾರೆ. ಪ್ರತಿಷ್ಠಿತ ಉದ್ದಿಮೆದಾರರಾದ ಶ್ರೀ ಶಿವಶರಣಪ್ಪ ಗಾರಂಪಳ್ಳಿ ಆಡಳಿತಾಧಿಕಾರಿಗಳ ಮಾರ್ಗದರ್ಶನದಲ್ಲಿ ಮುನ್ನಡೆದು ನಂತರ ಶ್ರೀ ಅಶೋಕ್ ಪಾಟೀಲ್ ಚಿಂಚೋಳಿಯವರ ಮಾರ್ಗದರ್ಶನದಲ್ಲಿ ಶಾಲೆಯು ಉತ್ತಮ ರೀತಿಯಲ್ಲಿ ನಡೆಯಿತು ನಂತರ ಶ್ರೀ, ಲಿಂಗಾರೆಡ್ಡಿ ಶೇರಿ ಅವರು ಆಡಳಿತ ಅಧಿಕಾರಿಗಳಾಗಿದ್ದರು ಸದ್ಯ ಶ್ರೀ, ಮಹಿಪಾಲರೆಡ್ಡಿ ಆಡಳಿತ ಅಧಿಕಾರಿಗಳಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ವಿದ್ಯಾ ಭಾರತಿ ಆಯೋಜಿಸಿರುವ ವಿಜ್ಞಾನ ಪ್ರದರ್ಶನ, ವೇದ ಗಣಿತ ರಸಪ್ರಶ್ನೆ ಹಾಗೂ ಸಂಸ್ಕೃತಿ ಜ್ಞಾನ ಪರಿಚಯ ರಸಪ್ರಶ್ನೆ, ಕ್ರೀಡಾಕೂಟ ಸ್ಪರ್ಧೆಗಳಲ್ಲಿ ಪ್ರಾಂತ ಮಟ್ಟ, ಕ್ಷೇತ್ರ ಮಟ್ಟ ಹಾಗೂ ಅಖಿಲ ಭಾರತ ಮಟ್ಟದವರೆಗೆ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಶಾಲೆ ಮತ್ತು ಸಂಸ್ಥೆಗೆ ಕೀರ್ತಿ ತಂದಿದ್ದಾರೆ
ನಮ್ಮ ಶಾಲೆಯು ಎಲ್ಲಾ ಮೂಲ ಸೌಕರ್ಯಗಳನ್ನು ಒಳಗೊಂಡಿದ್ದು. ಉತ್ತಮವಾದ ಪರಿಸರದಲ್ಲಿ ಶಾಲಾ ಚಟುವಟಿಕೆಗಳು ನಡೆಯುತ್ತಿವೆ. ಶಾಲೆಯು ಚಿಂಚೋಳಿ ಪಟ್ಟಣದಿಂದ ಸುಮಾರು ಒಂದುವರೆ ಕಿಲೋಮೀಟರ್ ದೂರದಲ್ಲಿದ್ದು ಯಾವುದೇ ತರಹದ ವಾಯುಮಾಲಿನ್ಯ, ಶಬ್ದ ಮಾಲಿನ್ಯ ವಿರದ ಹಸಿರು ತುಂಬಿದ ಗಿಡಮರ ಪರಿಸರದಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಂಸ್ಕೃತಿಕ ಸಂಘದ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಸ್ಮಾರ್ಟ್ ಕ್ಲಾಸ್ ದೊರೆತಿದೆ. ಹಾಗೂ ಕಂಪ್ಯೂಟರ್ ವ್ಯವಸ್ಥೆಯು ಒಳಗೊಂಡಿದೆ.
Academics
High School
Matru Mandir Higher School Chincholi