ಶ್ರೀಮತಿ ನಥಿಯ ಸೀತಾರಾಮ್ ಜೇಠಮಲ್ ತಾಪಡಿಯ ಮಾತೃಛಾಯ ಪದವಿ ಪೂರ್ವ ಕಾಲೇಜು ಸೇಡಮ್.

Image
Image
Image
Image
Image
About Us

Smt Nathibai Sitaram Jethamal Tapadiya Matruchaya P U College Sedam

 1986 ರಲ್ಲಿ ಮಾತೃಶಯ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗವನ್ನು, ನಂತರ ಪಾಲಕರ ಬೇಡಿಕೆಗನುಗುಣವಾಗಿ ಮತ್ತು ವಿದ್ಯಾರ್ಥಿಗಳ ಬೇಡಿಕೆಗನುಗುಣವಾಗಿ ವಿಜ್ಞಾನ ವಿಭಾಗವನ್ನು ಪ್ರಾರಂಭಿಸಲಾಯಿತು.
 ರಾಜ್ಯದ ಗಡಿಭಾಗದಲ್ಲಿರುವ ಸೇಡಂ ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ, ರಾಷ್ಟ್ರಭಕ್ತಿ,ರಾಷ್ಟ್ರಪ್ರೇಮದ ಜೊತೆ ಉತ್ತಮ ಸಂಸ್ಕಾರಗಳನ್ನು ನೀಡುತ್ತಾ ಮಕ್ಕಳ ಸರ್ವಾಂಗಿಣ ಬೆಳವಣಿಗೆಗೆ ಪ್ರಯತ್ನಿಸುತ್ತಿದೆ.

ಮಾತೃಛಾಯಾ ಪ್ರೌಢ ಶಾಲೆಯು 1981-82 ಸಾಲಿನಲ್ಲಿ ಕೆಲವೇ ಮಕ್ಕಳಿಂದ ಶಾಲೆ ಪ್ರಾರಂಭವಾಯಿತು. ಸೇಡಂ ಪಟ್ಟಣದ ಪ್ರತಿಷ್ಠಿತ ಉದ್ಯಮದಾರ ತಾಪಾಡಿಯಾ ಪರಿವಾರದ ಶ್ರೀಮತಿ ನಥೀಭಾಯಿ ಸೀತಾರಾಮ್ ಜೇಠಮಲ್ ತಾಪಾಡಿಯಾ ಸ್ಮೃತಿಯಲ್ಲಿ ಮಾತೃ ಛಾಯಾ ಪ್ರೌಢಶಾಲೆ ಎಂದು ನಾಮಕರಣ ಮಾಡಲಾಯಿತು. ಶಾಲೆಯಲ್ಲಿ ಇಲ್ಲಿಯ ವರೆಗೆ 5420 ವಿದ್ಯಾರ್ಥಿಗಳು ಅಧ್ಯಯನ ಮಾಡಿದ್ದು, 167 ಸೇವಾ ಬಳಗ ಕಾರ್ಯನಿರ್ವಹಿಸಿದ್ದಾರೆ.
ಪದ್ಮಶ್ರೀ ಭಟ್ನಾಗರ್, ರಾಮನ ಪ್ರಶಸ್ತಿ ವಿಜೇತ ಪ್ರೊ ಸಿ ಪದ್ಮನಾಭ, ಶ್ರೀ ಮನ್ಮಥನಾಥ ಗುಪ್ತಾ, ಖ್ಯಾತ ಸಂಗೀತ ವಿದುಷಿ ಗಂಗೂಬಾಯಿ ಹಾನಗಲ್, ಮಾಜಿ ರಾಜ್ಯಪಾಲರು ಮತ್ತು ನಿವೃತ್ತ ನ್ಯಾಯಮೂರ್ತಿ ಶ್ರೀ ರಾಮಾ ಜೋಯಿಸ್, ಶಿಕ್ಷಣ ಚಿಂತಕ ಶ್ರೀ ಸು ರಾಮಣ್ಣ, ಡಾ. ನಾಗಲೋಟಿ ಮಠ, ಶ್ರೀ ವಿದ್ಯಾನಂದ ಶೆಣೈ, ಖ್ಯಾತ ಚಿಂತಕ ಶ್ರೀ ಕೆ ಎನ್ ಗೋವಿಂದಾಚಾರ್ಯ, ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು, ಶ್ರೀಮತಿ ಲಕ್ಷ್ಮಿ ಸಹೇಗಲ್, ಡಾ.ಗುರುರಾಜ ಕರ್ಜಗಿ, ಶ್ರೀಮತಿ ಸುಧಾ ಮೂರ್ತಿ ಮುಂತಾದ ಗಣ್ಯರು ಮಾರ್ಗದರ್ಶನ ನೀಡಿದ್ದಾರೆ.
ಕಳೆದ 42 ವರ್ಷಗಳಿಂದ ಶಾಲೆಯು ಪಠ್ಯ ಬೋಧನೆ ಜೊತೆಗೆ ವಿಜ್ಞಾನ ಪ್ರದರ್ಶನ, ಕ್ರೀಡೆ, ಸಾಹಿತ್ಯ, ಸಂಗೀತ,ಕಲೆ, ಪರಿಸರ ಸಂರಕ್ಷಣೆಯ ಜೊತೆಗೆ ಸಾಮಾಜಿಕ-ಶೈಕ್ಷಣಿಕ ಚಟುವಟಿಕೆಗಳನ್ನು ಯಶಸ್ವಿಯಾಗಿ ಹಮ್ಮಿಕೊಂಡು ಬಂದಿದೆ. ಈ ಶಾಲೆಯಲ್ಲಿ ವಿದ್ಯಾರ್ಥಿಗಳು ವಿಜ್ಞಾನ ಪ್ರದರ್ಶನದ ಮತ್ತು ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದವರೆಗೆ ಸಾಧನೆಗೈದಿದ್ದಾರೆ.
ಪುರಾತನ ಭಾರತೀಯ ಸಂಸ್ಕೃತಿ, ಸಾಹಿತ್ಯ, ವಿಜ್ಞಾನ ಹಾಗೂ ತತ್ವಶಾಸ್ತ್ರಗಳಲ್ಲಿ ವಿಪುಲವಾಗಿ ಉಪಯೋಗಿಸಲ್ಪಟ್ಟಿರುವ ಸಂಸ್ಕೃತ ಭಾಷೆ ಶಾಲೆಯಲ್ಲಿ ಬೋಧಿಸಲಾಗುತ್ತಿದೆ. ಶಾಲೆಯಲ್ಲಿ ಅದ್ಯಯನಗೈದ ವಿದ್ಯಾರ್ಥಿಗಳು ಡಾಕ್ಟರ್, ಇಂಜಿನಿಯರ್, ಸರಕಾರಿ ಸೇವೆ, ಶಿಕ್ಷಕರು, ರೈತರು ಉನ್ನತ ಹುದ್ದೆಯಲ್ಲಿ ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಾ, ಗೌರವಯುತ ಬದುಕು ಸಾಗಿಸುತ್ತಿದ್ದಾರೆ.
ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ, ವಿಜ್ಞಾನ ವಸ್ತು ಪ್ರದರ್ಶನ, ವಿದ್ಯಾ ಭಾರತಿ ರಾಜ್ಯಮಟ್ಟದ ಶಿಶು ಸಂಗಮ, ವಿಜ್ಞಾನ ಗಣಿತ ಮೇಳ, ಸಂಸ್ಕೃತಿ ಮಹೋತ್ಸವ ಮತ್ತು ಕಾರ್ಯಗಾರಗಳನ್ನು ಶಾಲೆಯಲ್ಲಿ ಆಯೋಜಿಸಿದೆ.
ಪ್ರಕೃತಿ ವಿಕೋಪ ಸಂಬAಧಿಸಿದ ಸಂದರ್ಭದಲ್ಲಿ ನಮ್ಮ ವಿದ್ಯಾರ್ಥಿಗಳು ತನು, ಮನ, ಧನ ಗಳಿಂದ ಸ್ಪಂದಿಸಿದ್ದಾರೆ. ಸೇವಾ ಬಳಗವು ತಾಲೂಕು ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳಿಗೆ ಮತ್ತು ಸನ್ಮಾನಕ್ಕೆ ಭಾಜನರಾಗಿದ್ದಾರೆ. ಪ್ರಸ್ತುತ ವರ್ಷದಲ್ಲಿ 383 ವಿದ್ಯಾರ್ಥಿಗಳು ಅಧ್ಯಯನಗೈಯುತ್ತಿದ್ದು 20 ಸೇವಾ ಬಳಗ ಕಾರ್ಯ ನಿರ್ವಹಿಸುತ್ತಿದೆ.

Academics

01

SCIENCE

PCMB, PCMC

02

COMMERCE

HEBA, EBACS, SBACS

03

ARTS

HEPS

Gallery