ಶ್ರೀ ಸರಸ್ವತಿ ವಿದ್ಯಾ ಮಂದಿರ ಹಿರಿಯ ಪ್ರಾಥಮಿಕ ಶಾಲೆ, ಮುಧೋಳ
About Us
Sri Saraswati Vidya Mandir Higher Primary School Mudhol
ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ಶ್ರೀ ಸರಸ್ವತಿ ವಿದ್ಯಾ ಮಂದಿರ ಹಿರಿಯ ಪ್ರಾಥಮಿಕ ಶಾಲೆ ಮುಧೋಳ ಸೇಡಂ ತಾಲೂಕ 1983-84ರ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಗೊAಡು ಕರ್ನಾಟಕದ ಗಡಿ ಭಾಗದ ಮುಧೋಳ್ ಗ್ರಾಮದಲ್ಲಿ ಶೈಕ್ಷಣಿಕ ಸೇವೆಗೈಯ್ಯುತ್ತಿದೆ. ಲಿಂ ಪೂಜ್ಯ ಶ್ರೀ ಮಡಿವಾಳಯ್ಯ ಸ್ವಾಮಿಗಳ ಅಮೃತ ಹಸ್ತದಿಂದ ಪ್ರಾರಂಭಗೊAಡ ಶ್ರೀ ಸರಸ್ವತಿ ವಿದ್ಯಾಮಂದಿರ ಹಿರಿಯ ಪ್ರಾಥಮಿಕ ಶಾಲೆಯ ಮೊದಲ ಪ್ರಧಾನ ಅಧ್ಯಾಪಕರಾಗಿ ಶ್ರೀ ನರೇಂದ್ರ ದೇವನಪಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಶ್ರೀ ಸಿದ್ದಯ್ಯ ಹಿರೇಮಠ ಅವರು ಪ್ರಧಾನ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಾರಂಭದಲ್ಲಿ ಕೇವಲ 29 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದು ಇಂದು ಸುಮಾರು ಒಂದು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶಾತಿ ಪಡೆದು ಪ್ರಾಥಮಿಕ ಶಿಕ್ಷಣದ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಪೂಜ್ಯ ಶ್ರೀ ನಿರ್ಭಯಾನಂದ ಸ್ವಾಮಿಗಳು, ಶ್ರೀ ಜಿ ಆರ್ ಜಗದೀಶ, ಶ್ರೀ ಯು ಭಿಮರಾವ್, ಶ್ರೀ ಪಿ ಭೀಮರೆಡ್ಡಿ ಶಾಲೆಗೆ ಭೇಟಿ ನೀಡಿ ಮಾರ್ಗದರ್ಶನಗೈಯ್ದಿದ್ದಾರೆ.
ಶಾಲೆ ಸುಸಜ್ಜಿತವಾದ ಕಟ್ಟಡವನ್ನು ಹೊಂದಿ ಮಕ್ಕಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಮಾರ್ಗದರ್ಶನವನ್ನು ನೀಡುತ್ತಿದ್ದು, ಮಕ್ಕಳು ಪ್ರತಿಭಾ ಕಾರಂಜಿ ಮತ್ತು ತಾಲೂಕ, ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿದ್ದು ಶಾಲೆಗೊಂದು ಹೆಮ್ಮೆ.
Academics
Higher Primary
Sri Saraswati Vidya Mandir Higher Primary School Mudhol