ಶ್ರೀ ತುಳಜಾ ಭವಾನಿ ಶಿಶು ಮಂದಿರ, ಸೇಡಂ
About Us
Tulaja Bhavani Shishu Mandir
1974 ರಲ್ಲಿ ಶಿಶುಮಂದಿರ ಎಂಬ ಹೆಸರಿನಿಂದ ಪ್ರಾರಂಭವಾದ ನಮ್ಮ ಶಿಕ್ಷಣ ಸಮಿತಿಯ ಪ್ರಥಮ ಪ್ರಕಲ್ಪವು ಪೂಜ್ಯ ಶ್ರೀ ರಾಜೋಟ್ಟಯ್ಯ ಸ್ವಾಮಿಗಳು ಅಲ್ಲೋಳ್ಳಿಯವರ ಅಮೃತ ಹಸ್ತದಿಂದ ಸ್ಥಾಪನೆಗೊಂಡು ಇಲ್ಲಿಯವರೆಗೆ 11,987 ಶಿಶು ಮಕ್ಕಳು ಪೂರ್ವ ಪ್ರಾಥಮಿಕ ಸಂಸ್ಕಾರಯುತ ಶಿಕ್ಷಣವನ್ನು ಪಡೆದರು. ಶ್ರೀಮತಿ ಸಾವಿತ್ರಿ ಡಿ ಅವರು ಮೊದಲ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದರು. ದಿ. ಗುಂಡೇರಾವ ಪಾಟೀಲ್ ನಿವೃತ್ತ ಶಿಕ್ಷಣಾಧಿಕಾರಿಗಳು ಕಟ್ಟಡದ ದಾನಿಗಳು. ದಾನಿಗಳ ಅಪೇಕ್ಷೆಯಂತೆ ತುಳಜಾಭವಾನಿ ಶಿಶುಮಂದಿರ ಎಂದು ನಾಮಕರಣ. ಶಿಶು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿದೆ.
ಶಿಶು ಶಿಕ್ಷಣದ ಬಗ್ಗೆ ವಿಶೇಷತೆ ಚಟುವಟಿಕೆ ಆಧಾರಿತ ಆಟದೊಂದಿಗೆ ಪಾಠ ಮಾಡಲಾಗುತ್ತದೆ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಜೂನ್ ಎರಡನೇ ವಾರದಂದು ಮಕ್ಕಳಿಗೆ ಸರಸ್ವತಿ ಮಂದಿರಕ್ಕೆ ಕರೆದುಕೊಂಡು ಹೋಗಿ ದರ್ಶನ ಪಡೆದುಕೊಂಡು ಬಂದು ವರ್ಗಗಳು ಪ್ರಾರಂಭ ಮಾಡುತ್ತೇವೆ, ಮಣ್ಣೆತ್ತಿನ ಅಮಾವಾಸ್ಯೆಯ ದಿನದಂದು ಮಕ್ಕಳ ಕೈಯಿಂದ ಎತ್ತುಗಳು ಮಾಡಿ ಎತ್ತುಗಳಿಂದ ಆಗುವ ಉಪಯೋಗ ಹೇಳಲಾಗುತ್ತದೆ. ಪ್ರತಿ ವರ್ಷ ಪೂಜ್ಯಶ್ರೀ ಸದಾಶಿವ ದೇವರು ಇವರ ಅಮೃತ ಹಸ್ತದಿಂದ ಪಾಟಿ ಪೂಜೆ ಹಾಗೂ ಅಕ್ಷರಭ್ಯಾಸ ಮಾಡಿಸಲಾಗುವುದು. ಆಯಾ ತಿಂಗಳಲ್ಲಿ ಹುಟ್ಟಿದ ಎಲ್ಲಾ ಮಕ್ಕಳ ಹುಟ್ಟುಹಬ್ಬವನ್ನು ತಿಂಗಳ ಕೊನೆಯಲ್ಲಿ ಆಚರಿಸು ಆಚರಿಸುತ್ತೇವೆ ಆ ದಿನ ಪ್ರಾರ್ಥನೆಗೆ ಮಕ್ಕಳ ಪಾಲಕರಿಗೂ ಮತ್ತು ಮಾತೆಯರಿಗೂ ಉಪಸ್ಥಿತಿ ಇರಲು ಹೇಳುತ್ತೇವೆ ಹಾಗೂ ಅವರನ್ನ ನೇತೃತ್ವದಲ್ಲಿ ಪ್ರಾರ್ಥನೆ ಮತ್ತು ಹುಟ್ಟುಹಬ್ಬವನ್ನು ಆಚರಿಸುತ್ತೇವೆ.
"ಆಟ ಪಾಠಗಳೊಂದಿಗೆ ಸಂಸ್ಕಾರವನ್ನು ಬೆಳಸಿ ಭವಿಷ್ಯ ನಿರ್ಮಿಸುವುದು”
Academics
Nursery
3 + years
L.K.G
4 + years
U.K.G
5+ years