ಸೇಡಂನ ಸ್ವರ್ಣ ಜಯಂತಿ ಕಾರ್ಯಾಲಯ ಕಾನಗಡ್ಡ ಕಲ್ಯಾಣ ಮಂಟಪದಲ್ಲಿ 12 ಸೆಪ್ಟೆಂಬರ್ 2024 ರಂದು ಕೊತ್ತಲ ಸ್ವರ್ಣ ಜಯಂತಿ ಹಾಗೂ ಭಾರತೀಯ ಸಂಸ್ಕೃತಿ ಉತ್ಸವದ ನಿಮಿತ್ಯ ಅನೇಕ ವ್ಯವಸ್ಥೆಗಳ ಕುರಿತು ಸಭೆ ನಡೆಯಿತು. ವಿವಿಧ ಲೋಕ ಹಾಗೂ ಪ್ರದರ್ಶನಿಗೆ ಬೇಕಾಗುವ ಸಾಮಗ್ರಿಗಳು ಊಟದ ವ್ಯವಸ್ಥೆ ಮತ್ತು ಅಡುಗೆ ಸಾಮಾಗ್ರಿಗಳು ಸಭಾಮಂಟಪದ ವ್ಯವಸ್ಥೆ ಮೈಕ್ ಸಿಸಿ ಕ್ಯಾಮೆರಾ ಫೋಟೋಗ್ರಾಫಿ ವೀಡಿಯೋ ಗ್ರಾಫಿಕ್ ಮುಂತಾದ ವಿಷಯಗಳ ಕುರಿತು ನೀಲನಕ್ಷೆಯ ಪ್ರಕಾರ ವಿಸ್ತೃತವಾದ ಚರ್ಚೆ ನಡೆಯಿತು. ಸಭೆಯಲ್ಲಿ ಪೂಜ್ಯ ಸದಾಶಿವ ಸ್ವಾಮಿಗಳು ಅಧ್ಯಕ್ಷರು ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ. ಶ್ರೀ ಬಸವರಾಜ್ ಪಾಟೀಲ್ ಸೇಡಂ, ಶ್ರೀ ಸಂಗು ಸಜ್ಜನ್ ಬಿಜಾಪುರ, ಶ್ರೀ ತಿಪ್ಪೇಸ್ವಾಮಿ ದಾವಣಗೆರೆ, ಶ್ರೀ ರಮೇಶ್ tapadiya, ಶ್ರೀ ವಿಶ್ವನಾಥ್ ಕೋರಿ, ಬಿಜಾಪುರದ ಅನೇಕ ಸ್ಥಾಪಕರು ಆಗಮಿಸಿದ್ದರು.






