ಕಲ್ಯಾಣ ಕರ್ನಾಟಕ ಹೋರಾಟದ ಇತಿಹಾಸ ನಮ್ಮ ಮಕ್ಕಳಿಗೆ ತಿಳಿಸುವ ಪ್ರಯತ್ನ ನಮ್ಮದಾಗಲಿ :
ಡಾ. ಉದಯಕುಮಾರ ಶಹಾ
ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ವಿವಿಧ ಪ್ರಕಲ್ಪಗಳವತಿಯಿಂದ ಆಯೋಜಿತ ಕಲ್ಯಾಣ ಕರ್ನಾಟಕ ಉತ್ಸವದ ಸಾಮೂಹಿಕ ಧ್ವಜಾರೋಣವು ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಆವರಣದಲ್ಲಿಯ ಪೂಜ್ಯ ಶ್ರೀ ಶಿವಶಂಕರ ಸ್ವಾಮಿ ಸ್ಮೃತಿ ಬಾಲ ಭಾರತಿ ವಿದ್ಯಾ ಮಂದಿರದಲ್ಲಿ ನೆರವೇರಿಸುತ್ತಾ ಮಾತನಾಡಿದ ಶಿಕ್ಷಣ ಸಮಿತಿಯ ಉಪಾಧ್ಯಕ್ಷರಾದ ಡಾಕ್ಟರ್ ಉದಯ್ ಕುಮಾರ್ ಶಹಾ ಅವರು ಮಾತನಾಡಿ ನಿಜಾಮರ ಆಳ್ವಿಕೆಯಲ್ಲಿ ಇದ್ದ ನಮ್ಮ ಭಾಗದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಹೋರಾಟಗಾರರ ಹೆಸರನ್ನು ಸ್ಮರಿಸುತ್ತಾ, ಕಲ್ಯಾಣ ಕರ್ನಾಟಕ ಭಾಗದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಇತಿಹಾಸವನ್ನು ನಮ್ಮ ಮಕ್ಕಳಿಗೆ ತಿಳಿಸುವುದು ಅತಿ ಅವಶ್ಯಕವಾಗಿದೆ ಎಂದರು.
ಈ ನಿಟ್ಟಿನಲ್ಲಿ ಶಿಕ್ಷಕ ಸಮೂಹವನ್ನು ವಿನಂತಿಸುತ್ತಾ, ನಮ್ಮ ಭಾಗದ ಹೋರಾಟ ಸ್ವರೂಪವನ್ನು ಮಕ್ಕಳಿಗೆ ತಿಳಿಸಬೇಕೆಂದರು.




ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಿಕ್ಷಣ ಸಮಿತಿಯ ಸಂರಕ್ಷಕರಾದ ಬಸವರಾಜ್ ಪಾಟೀಲ್ ಸೇಡಂ, ಕಾರ್ಯದರ್ಶಿಗಳಾದ ಶ್ರೀಮತಿಯ ಅನುರಾಧ ಪಾಟೀಲ್, ಸಹ. ಕಾರ್ಯದರ್ಶಿಗಳಾದ ಡಾ. ಸದಾನಂದ ಬೂದಿ, ಕೋಶಾಧ್ಯಕ್ಷರಾದ ಶ್ರೀ ಶಿವಾರೆಡ್ಡಿ ಹೂವಿನಬಾವಿ, ಸದಸ್ಯರಾದ ಶ್ರೀ ನರೇಂದ್ರ, ಶ್ರೀ ಮನೋಹರ್ ದೋಂತಾ, ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಕೋಶಾಧ್ಯಕ್ಷರಾದ ಶ್ರೀ ಸಿದ್ದಪ್ಪ ತಳ್ಳಳ್ಳಿ ನಿವೃತ್ತ ಮುಖ್ಯ ಗುರುಗಳಾದ ಶ್ರೀ ಪಿ ಭೀಮರೆಡ್ಡಿ ಹಾಗೂ ನಿವೃತ್ತ ಸೇವಾ ಬಳಗ, ಶಾಲಾ ಸುಧಾರಣಾ ಸಮಿತಿ ಸದಸ್ಯರು, ಮಾತೃ ಭಾರತಿ ಸದಸ್ಯರು, ಆಡಳಿತ ಅಧಿಕಾರಿಗಳು ಶಿಕ್ಷಣ ಸಂಯೋಜಕರು, ಶಿಕ್ಷಣ ಸಮಿತಿಯ ಸರ್ವ ಸೇವಾ ಬಳಗ, ವಿಶೇಷ ಆಮಂತ್ರಿತರು, ಸಮಿತಿಯ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
https://www.facebook.com/share/v/1FXmCvJQx1/
