
ಶ್ರೀ ತುಳಜಾ ಭವಾನಿ ಶಿಶು ಮಂದಿರದಲ್ಲಿ ಸೇಡಂನಲ್ಲಿ ಬರುವ ಎಲ್ಲಾ ಶಿಶು ಮಂದಿರಗಳ ಶಾಲೆಯಿಂದ ಐದು ಮಕ್ಕಳಿಗೆ ಕರೆಸಿ ಹಾಗೂ ನಮ್ಮ ಶಾಲೆಯ ರ್ವ ಮಕ್ಕಳು ಸೇರಿ ೧೫೦ಕ್ಕೂ ಹೆಚ್ಚು ಶ್ರೀ ಕೃಷ್ಣನ ವೇಷ ಧರಿಸಿಕೊಂಡು ಬಂದು ತುಂಬಾ ಅಚ್ಚು ಕಟ್ಟಾಗಿ ಕರ್ಯಕ್ರಮ ಆಚರಿಸಲಾಯಿತು. ಶ್ರೀಮತಿ ಗಂಗಾದೇವಿ ನಿಷ್ಠಿ ಇವರು ಶ್ರೀ ಕೃಷ್ಣನ ಬಾಲ ಲೀಲೆಗಳ ಬಗ್ಗೆ ಮಾತನಾಡಿದ್ದರು. ನಮ್ಮ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಅನುರಾಧ ಎ ಪಾಟೀಲ್, ಶ್ರೀಮತಿ ಬಸವಲಿಂಗಮ್ಮ ಬಿ ಪಾಟೀಲ್, ಸರ್ವ ಸುಧಾರಣಾ ಸಮಿತಿ ಸದಸ್ಯರು ಹಾಗೂ ಮಾತೃಭಾರತಿ ಸದಸ್ಯರು ಉಪಸ್ಥತರಿದ್ದರು ಮತ್ತು ಪ್ರಧಾನ ಅಧ್ಯಪಕರು ಹಾಗೂ ಸರ್ವ ಶಿಕ್ಷಕರು ಸೇರಿ ಮಕ್ಕಳಿಗೆ ಬಹುಮಾನ ವಿತರಿಸಿದ್ದರು.
