
ಪದ್ಮಶ್ರೀ ಪ್ರಶಸ್ತಿ ವಿಜೇತೆ, ಖ್ಯಾತ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು ಇಂದು ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ಶ್ರೀಮತಿ ನರ್ಮದಾ ದೇವಿ ಗಿಲಡಾ ಮಹಿಳಾ ಪದವಿ ಕಾಲೇಜು ಹಾಗೂ ನೃಪತುಂಗ ಪದವಿ ಕಾಲೇಜು ಮತ್ತು ಶ್ರೀಮತಿ ನರ್ಮದಾದೇವಿ ಗಿಲಡಾ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ತೊಂದರೆಗಳನ್ನು ಸಮರ್ಥವಾಗಿ ಎದುರಿಸಿದಾಗ ಮಾತ್ರ ಯಶಸ್ಸು ಸಾಧಿಸಬಹುದೆಂದರು.
ಮುಂದುವರೆದು ಅವರು ಮಾತನಾಡುತ್ತಾ, ತಮ್ಮ ಜೀವನಾನುಭವದ ಯಶೋಗಾದೆಯನ್ನು ವಿದ್ಯಾರ್ಥಿನಿಯರಿಗೆ ವಿವರಿಸುತ್ತಾ, ಪರಿಶ್ರಮವೇ ಸಾಧನೆಯ ಸಾಧನವಾಗಿದ್ದು, ಕೌಟುಂಬಿಕ ಸಮಸ್ಸೆಗಳಿಗಳಿಗೆ ಹೆದರದೆ, ತಮ್ಮ ಪಾಲಕರ ಮನೋ ಇಚ್ಛೆಯನ್ನು ಅರ್ಥ ಮಾಡಿಕೊಂಡು ವಿದ್ಯಾರ್ಥಿ ಜೀವನದಲ್ಲಿ ಸಮಚಿತ್ತದಿಂದ ತಂತ್ರಜ್ಞಾನದ ಮೂಲಕ ಅಧ್ಯಯನದಲ್ಲಿ ತೊಡಗಿ ಉತ್ತಮ ಫಲಿತಾಂಶ ಪಡೆಯುವವರು ತಾವಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಮಿತಿಯ ಕಾರ್ಯದರ್ಶಿಗಳಾದ ಅನುರಾಧ ಪಾಟೀಲ್ ಅವರು ಅಧ್ಯಕ್ಷೀಯ ಮಾತುಗಳಾನ್ನಾಡಿದರು.
ವಿಶೇಷ ಉಪನ್ಯಾಸ ಕಾರ್ಯಕ್ರಮವು ಸಾಮೂಹಿಕ ಸರಸ್ವತಿ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು.
ಶ್ರೀಮತಿ ನರ್ಮದಾ ದೇವಿ ಗಿಲಡಾ ಕಾಲೇಜಿನ ಉಪ ಪ್ರಾಚಾರ್ಯರಾದ ಶ್ರೀಮತಿ ಆರತಿ ಕಡಗಂಚಿ ಸ್ವಾಗತಿಸಿದರು.
ನೃಪತುಂಗ ಪದವಿ ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕಿ ಡಾ. ಅಮರಮ್ಮ ಪಾಟೀಲ ವಂದನಾರ್ಪಣೆಗೈದರು.
ಶ್ರೀಮತಿ ನರ್ಮದಾದೇವಿ ಗಿಲಡಾ ಪದವಿ ಮಹಾವಿದ್ಯಾಲಯದ ಉಪನ್ಯಾಸಕಿ ಶ್ರೀಮತಿ ಲಕ್ಷ್ಮಿ ಹೆಬ್ಬಾಳ ಕಾರ್ಯಕ್ರಮ ನಿರ್ವಹಿಸಿದರು.

