
ಸೇಡಮ್ ನಲ್ಲಿ ಇಂದು ಸಮರ್ಥ ಭಾರತ – ಶ್ರೇಷ್ಠ ಸಂತಾನ: ವಿನೂತನ ಕಾರ್ಯಕ್ರಮ*
********************
ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಹಯೋಗದಲ್ಲಿ ಆಯೋಜಿತ *ಸಮರ್ಥ ಭಾರತ ಶ್ರೇಷ್ಠ ಸಂತಾನ* ಎಂಬ ವಿನೂತನ ಕಾರ್ಯಕ್ರಮವು ಸ್ಥಳೀಯ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ನಾಗೇಂದ್ರಪ್ಪ ಬಿ ಪಾಟೀಲ್ ಅರೆಬೊಮ್ಮನಹಳ್ಳಿ, ಮಂಗಳಮಂಟಪದಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ *ವಿದ್ಯಾ ಭಾರತೀಯ ಶಿಶು ವಾಟಿಕಾ ದಕ್ಷಿಣ ಮಧ್ಯ ಕ್ಷೇತ್ರೀಯ, ಸಹ ಸಂಯೋಜಕರಾದ ಶ್ರೀಮತಿ ತಾರಾ ಕಾಳಿಚರಣ* ಅವರು ನವದಂಪತಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ನಾವು ಪಡೆಯುವ ಸಂತತಿಗೆ ಬುದ್ದ- ಬಸವನಾಗು, ಸಿದ್ಧ- ಶಿವಾಜಿಯಾಗು, ವಿವೇಕಾನಂದನಾಗು ಎಂದು ಹರಸಿ, ನಮ್ಮ ಮಗುವನ್ನು *ಮಹಾಸಾಧಕನನ್ನಾಗಿ ಮಾಡುವ ಶ್ರೇಷ್ಠ ಮಾತೆ ಆಗಬೇಕು ಎಂದರು.*
ಕಾರ್ಯಕ್ರಮದ ಅತಿಥಿಗಳಾದ
ಕಲಬುರಗಿಯ ಮಾತೃಛಾಯಾ ಆಸ್ಪತ್ರೆಯ *ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ನಂದಿನಿ ಬೋಸಗಿ* ಅವರು ಮಾತನಾಡುತ್ತಾ, ನವದಂಪತಿಗಳಾದ ತಾವು ಯಾವುದೇ ಟೆನ್ಶನ್ ಗೆ ಒಳಗಾಗದೆ ಮಾನಸಿಕ ಧೈರ್ಯವನ್ನು ಹೊಂದಿ, ತಮ್ಮ ಮತ್ತು ತಮ್ಮ ಮಕ್ಕಳ ದೈಹಿಕ ಸಮಸ್ಯೆಗಳ ಕಡೆ ಹೆಚ್ಚು ಗಮನ ಹರಿಸಬೇಕೆಂದರು. ಅವರು ಮುಂದುವರೆದು ಮಾತನಾಡುತ್ತಾ, *ಕುಟುಂಬದ ಎಲ್ಲ ಸದಸ್ಯರ ಜೊತೆ ಉತ್ತಮ ಸಂಬಂಧವನ್ನು ಹೊಂದಿದರೆ ಮಾತ್ರ ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯ* ಕಾಯ್ದುಕೊಳ್ಳಬಹುದೆಂದರು.
ಇನ್ನೋರ್ವ ಅತಿಥಿಗಳಾದ ಡಾ ರತ್ನಶ್ರೀ ರೇಮಣ್ಣಿ ಅವರು ಮಾತನಾಡುತ್ತಾ, *ಗರ್ಭಿಣಿ ಸ್ತ್ರೀಗೆ ಸರಿಯಾದ ಆಹಾರ ಬಹಳ ಮುಖ್ಯ* ಎನ್ನುತ್ತಾ, ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸಮತೋಲನ ಆಹಾರದ ಜೊತೆಗೆ ಪೌಷ್ಟಿಕಾಂಶಯುಕ್ತ ಆಹಾರ,ಕಬ್ಬಿಣ,ಕ್ಯಾಲ್ಸಿಯಂ, ಹಣ್ಣುಗಳು ಮತ್ತು ತರಕಾರಿಗಳು ಮತ್ತು ಅವಶ್ಯಕ ಪ್ರಮಾಣದ ನೀರು ಸೇವನೆಯ ಜೊತೆಗೆ
ಜಂಕ್ ಫುಡ್ (ಪಿಜ್ಜಾ, ಬರ್ಗರ್)
ಹೆಚ್ಚು ಎಣ್ಣೆ, ಅತಿಯಾದ ಖಾರದ ಆಹಾರ, ಅರೆ ಬೇಯಿಸಿದ *ಆಹಾರ ತ್ಯಜಿಸಬೇಕೆಂದರು*.
ಸಕಾರಾತ್ಮಕ ಶಕ್ತಿ ವೃದ್ಧಿ, ಮನಸ್ಸಿಗೆ ಶಾಂತಿ, ಏಕಾಗ್ರತೆ ಮತ್ತು ಧ್ಯಾನಶಕ್ತಿ ಹೆಚ್ಚಿಸಲು,ಪರಿಸರ ಸ್ವಚ್ಛತೆ ಮತ್ತು ಮಾನಸಿಕ ಒತ್ತಡ ಕಡಿಮೆಗೊಳಿಸುವದಕ್ಕಾಗಿ, ಪರಿಸರ ಸ್ವಚ್ಛತೆಗಾಗಿ *ಅಗ್ನಿಹೋತ್ರವೆಂಬ ಪವಿತ್ರ ಪೂಜೆಯಲ್ಲಿ ನವದಂಪತಿಗಳು ಪಾವನ ಸಂಕಲ್ಪಗೈದರು.*
ಕಾರ್ಯಕ್ರಮವು ವಿದ್ಯಾಮಂದಿರ ಸಿ.ಬಿ.ಎಸ್.ಇ ಶಾಲೆಯ ಮಕ್ಕಳಿಂದ ಪ್ರಾರ್ಥನಾ ನೃತ್ಯದಿಂದ ಪ್ರಾರಂಭಗೊಂಡಿತು.
ಸ್ವಾಗತ : ಶ್ರೀಮತಿ ಶೋಭಾ ಪಾಟೀಲ, ಶಿಕ್ಷಕಿಯರು.
ಶ್ರೀಮತಿ ಅನುರಾಧ ಪಾಟೀಲ,ಕಾರ್ಯದರ್ಶಿಗಳು, ಪ್ರಾಸ್ತಾವಿಕ ಮಾತನಾಡಿದರು.
ನಿರೂಪಣೆ: ಶ್ರೀಮತಿ, ಶೋಭಾ ಪಾಟೀಲ್, ಪ್ರಾಚಾರ್ಯರು ಮತ್ತು
ಶ್ರೀಮತಿ ಸ್ನೇಹಲತಾ ಬಾಗೋಡಿ ಶಿಕ್ಷಕಿಯರು, ವಂದನಾರ್ಪಣೆಗೈದರು.

